ಕಾಡು..ಹಾಡು...ಇತ್ಯಾದಿ..

Thursday, March 17, 2011

ಮುಖಹೀನರ ಬ್ಲಾಗುಗಳು- ಕಾಮೆಂಟುಗಳು....

ಸೀದಾ, ಸಾದಾ ಪ್ರಾಧ್ಯಾಪಕ. ಅದಕ್ಕಿಂತ ಹೆಚ್ ಏನ್ ಇಲ್ರಿ. ಹುಟ್ಟಿದ್ದು, ಓದಿದ್ದು ಧಾರವಾಡ. ಕೆಲಸ ಮಾಡುತ್ತಿರೋದ್ ಬೆಂಗಳೂರು. ಸುಮ್ನ ಖುಷೀಗ್ ಓದ್ತಿರ್ತೇನ್ರಿ. ಓದಿದ್ದು, ನೋಡಿದ್ರ ಬಗ್ಗ ಈಗ ಬರೆಯೋ ಹಂಬ್ಲಾರಿ. ಹಿಂಗೈತಿ ನಮ್ ಕತಿ- ಈ ರೀತಿ ತನ್ನ ಬಗ್ಗೆ ಬರೆದುಕೊಂಡಿರೋದು http://mediamana.blogspot.com/ ಬ್ಲಾಗ್ ನ ಮನುಷ್ಯ.....
ಇವರು ನಿನ್ನೆ ತಮ್ಮ ಬ್ಲಾಗ್ ನಲ್ಲಿ ಸುವರ್ಣ ನ್ಯೂಸ್ ನಿಂದ ರಂಗನಾಥ್ ಅವರನ್ನು ಹೊರ ಹಾಕಿದ್ದಾರೆ ಅಂತಾ ಬರೆದಿದ್ದರು. ಇದು ಬ್ಲಾಗ್ ಮೀಡಿಯಾ ಲೋಕದಲ್ಲಿ ಬಿಸಿಬಿಸಿ ಚರ್ಚೆಗೂ ಕಾರಣವಾಗಿತ್ತು...
ಆದರೆ, ವೈಯಕ್ತಿಕ ಕೆಲಸಕ್ಕಾಗಿ ರಂಗನಾಥ್ ರಜೆ ಹಾಕಿ ಹೋಗಿದ್ದರು- ಇದು ಅವರು ಮತ್ತು ಕಚೇರಿ ಸಿಬ್ಬಂದಿ ಖಚಿತಪಡಿಸಿದ ಮಾಹಿತಿ....
ಇಂದು ರಂಗನಾಥ್ ಕಚೇರಿಯಲ್ಲಿದ್ದಾರೆ. ಆದ್ರೆ, ಈ ಬ್ಲಾಗ್ ನಲ್ಲಿ ನಾವು ಸುಳ್ಳು ಬರೆಯಂಗಿಲ್ಲ, ಬರೆದಿದ್ದು ಸುಳ್ಳಾಗಂಗಿಲ್ಲ! ರಂಗನಾಥ್ ಇವತ್ತು ಬಂದಿದಾರೆ. ಮುಂದೊಮ್ಮೆ ಸುವರ್ಣ ಬಿಟ್ಟು ಹೋಗೇ ಹೋಗ್ತಾರೆ ನೋಡ್ತಿರಿ ಎಂಬರ್ಥದಲ್ಲಿ ಬರೆದಿದ್ದಾರೆ. ಮುಂದೊಂದು ದಿನ ಪ್ರಳಯ ಆಗೇ ಆಗುತ್ತೆ ನೋಡ್ತಿರಿ... ನಾವೇಳಿದ್ದು ಸುಳ್ಳಾಗಂಗಿಲ್ಲ ಎಂದು ಜ್ಯೋತಿಷಿಗಳು ಹೇಳಿದಂತೆ ಹೋಗ್ಲಿ ಬಿಡಿ ಮುಂದಿನ ಬಗ್ಗೆ ಈಗ ಬೇಡ...
ನಾನು ಹೇಳ ಹೊರಟಿರುವ ಮುಖ್ಯ ಸಂಗತಿ ಅಂದ್ರೆ....

ಮೀಡಿಯಾಮನ ಎಂಬ ಬ್ಲಾಗ್ ನಲ್ಲಿ ಉಗಮ ಎಂಬ ಹೆಸರಿನಲ್ಲಿ ಒಂದು ಕೆಟ್ಟದಾದ ಕಾಮೆಂಟ್ ಇದೆ. ಪತ್ರಿಕೋದ್ಯಮದಲ್ಲಿ ಉಗಮ ಶ್ರೀನಿವಾಸ, ಉಗಮ ಎಂಬ ಪೆನ್ ನೇಮ್ ನಲ್ಲಿ ಬರಿತೀರೋದು ಕನ್ನಡಪ್ರಭದ ತುಮಕೂರು ವರದಿಗಾರ ಎಸ್.ಎನ್.ಶ್ರೀನಿವಾಸ್ ಒಬ್ಬರೆ. ಆದರೆ, ಈ ಕಾಮೆಂಟ್ ಹಾಕಿರೋದು ಉಗಮ ಅಲ್ಲ.. ಅವರ ಹೆಸರಿನಲ್ಲಿ ಬೇರೆಯರು ಹಾಕಿದ್ದಾರೆ... ನನ್ನ ಹೆಸರಿನ ಈ ಕಾಂಮೆಂಟ್ ತೆಗಿರಿ ಅಂದ್ರೆ.... ನೀವೊಬ್ಬರೇನಾ ಉಗಮ ಅಂದ್ರೆ ಎಂದು ಪ್ರಶ್ನಿಸಿದ್ದಾರೆ. ಆ ಬ್ಲಾಗಿನವರು..
ಮುಖಹೀನ ಬ್ಲಾಗಿನವರು ಈ ರೀತಿ ಬೇರೆಯವರ ಹೆಸರಿನಲ್ಲಿ ತಾವೇ ಕಾಮೆಂಟ್ ಹಾಕಿಕೊಂಡು ಮಾನಸಿಕ ನೆಮ್ಮದಿ ಕದಡುವುದು ಎಷ್ಟುಸರಿ..
ಅವರವರ ಪಾಡಿಗೆ ಇದ್ದವರನ್ನು ಇಲ್ಲದ ಉಸಾಬರಿಗೆ ಎಳೆಯುವುದು ಸರಿಯಲ್ಲ...
ಸುಳ್ಳು ಬರೆಯುವ ಪ್ರಾಧ್ಯಾಪಕನ ಈ ಬ್ಲಾಗನ್ನೂ, ಅವರ ಈ ನಡತೆಯನ್ನೂ ನಾನು ಖಂಡಿಸುತ್ತೆನೆ...
ನೀವು ಏನಾರಾ ಬರ್ಕೊಳ್ಳಿ, ಇನ್ನೊಬ್ಬರ ನೆಮ್ಮದಿ ಕದಡಬೇಡಿ ಎಂಬ ಮಾತನ್ನ ಹೇಳಬೇಕು... ಅವರಿಗೆ... ಅಲ್ವೆ...


ಅವರ ಬ್ಲಾಗಿನಲ್ಲಿ ನನ್ನ ಕಾಂಮೆಂಟ್ ಇನ್ನೂ ಪ್ರಕಟ ಆಗಿಲ್ಲ... ಅದನ್ನ ಇಲ್ಲಿ ದಾಖಲಿಸಿದ್ದೇನೆ....
ಎಚ್ಚರ ಇರುವ ಪ್ರಾಧ್ಯಾಪಕರಿಗೆ ನಮಸ್ಕಾರ್...
ನಿನ್ನೆ ನನ್ನ ಕಾಮೆಂಟ್ ಗೆ...
ನನಗೆ ಎಚ್ಚರ ಇದೆ. ಪಾಠ ಮಾಡುವ ಬಗ್ಗೆ ನೀವು ಪಾಠ ಮಾಡಬೇಡಿ. ಎಚ್ಚಜ ನಿಮಗೂ ಇರಲಿ. ನಾನು ಬರೆದಿದ್ದು ಸತ್ಯವಾ? ನೀವು ರಂಗನಾಥರಿಂದ ತಿಳಿದುಕೊಂಡಿದ್ದು ಸತ್ಯವಾ ನೋಡೇಬಿಡೋಣ...
ಅಂದಿದ್ರಿ... ಬಹುಶಃ ಇನ್ನೂ ಎಷ್ಟುದಿನ ಈ ‘ನೋಡೇಬಿಡೋಣಾ’
ಸಧ್ಯದಲ್ಲೇ ನಾವು ಬರೆದದ್ದು ನಿಜವಾಗಲಿದೆ ಎಂದಿದ್ದೀರಿ... ಇದೂ ಕೂಡಾ ಅಷ್ಟೆ.. ‘ಸಧ್ಯ’ ಅಂದರೆ, ಒಂದು ವಾರ, ಒಂದು ತಿಂಗಳು, ಒಂದು ವರ್ಷ... ಪ್ರಾಧ್ಯಾಪಕರಿಗೆ ಬರೆಯುವಾಗ ಎಚ್ಚರ ಇರಬೇಕು ಅಂತಾ ಹೇಳಿದ್ದು, ಇದೇ ಕಾರಣಕ್ಕೆ....
ನಾನು ಹೇಳ ಹೊರಟಿದ್ದು.... ಉಗಮ ಶ್ರೀನಿವಾಸ ಅವರ ಹೆಸರಿನಲ್ಲಿ ಕಾಮೆಂಟ್ ಪ್ರಕಟ ಆಗಿದೆ. ಅದು ಅವರು ಬರೆದದ್ದಲ್ಲ.. ಯಾರದ್ದೋ ಹೆಸರಿನಲ್ಲಿ ನೀವು ಕಾಮೆಂಟ್ ಹಾಕೊಳ್ಳುವ ಅಗತ್ಯವಿತ್ತಾ.. ಅವರು... ಇದರಿಂದ ನೆಮ್ಮದಿ ಹಾಳಾಗಿದೆ... ನನ್ನ ಹೆಸರಿನ ಕಾಮೆಂಟ್ ತೆಗಿರೀ ಅಂದ್ರೂ ನೀವಲ್ಲ ಬೇರೆ ಉಗಮ ಅಂದಿದ್ದೀರಿ... ಈ ಬೇರೆ ಉಗಮ ಎಲ್ಲಿಂದು ಉದ್ಭವ ಆಗಿದ್ದು... ಈ ರೀತಿ ಮುಖಹೀನ ಬ್ಲಾಗ್ ಮಾಡಿ, ಇನ್ನೊಬ್ಬರ ನೆಮ್ಮದಿ ಕದಡಬೇಡಿ... ನಿಮ್ಮ ಸುಳ್ಳು ಬರೆಯುವ ಚಟಕ್ಕೆ ಯಾವ ಉಸಾಬರಿಗೂ ಹೋಗದ ಉಗಮನಂತವರು ಬಲಿಯಾಗದಿರಲಿ..